ಮೈಸೂರು: ಕೊರೋನಾ ವೈರಾಣು ಸೋಂಕಿನ ಭೀತಿ ಹಿನ್ನೆಲೆಯಲ್ಲಿ ತಮ್ಮ ರಜಾದಿನಗಳನ್ನು ಕಳೆಯಲು ತವರಿಗೆ ಮರಳಿರುವ 18 ಚೀನಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಮರಳದಂತೆ ಮೈಸೂರು ವಿಶ್ವವಿದ್ಯಾಲಯ ತಾತ್ಕಾಲಿಕ ನಿರ್ಬಂಧ ಹೇರಿದೆ.
ಸೋಂಕು ನಿಯಂತ್ರಣಕ್ಕೆ ಬರುವರೆಗೂ ಚೀನಾದಿಂದ ಮರಳದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ ಎಂದು ಮೈಸೂರು ವಿವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದೆ. ಮೈಸೂರು ವಿವಿಯ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ 120 ಚೀನಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 18 ವಿದ್ಯಾರ್ಥಿಗಳು ರಜೆ ಕಳೆಯಲು ಚೀನಾದ ವುಹಾನ್ ನಗರಕ್ಕೆ ತೆರಳಿದ್ದರು.
ಕೊರೋನಾ; ರಜೆ ಮೇಲೆ ತೆರಳಿರುವ 18 ಚೀನಿ ವಿದ್ಯಾರ್ಥಿಗಳಿಗೆ ನಿರ್ಬಂಧ
Follow Us