ಬೆಂಗಳೂರು:ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ನೆರೆ ರಾಷ್ಟ್ರಗಳಿಂದ ಮರಳಿರುವ ಇಬ್ಬರು ನಗರ ನಿವಾಸಿಗಳು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜ. 18ರಂದು ಚೀನಾದಿಂದ ಮರಳಿದ್ದ ಇಬ್ಬರು ಸ್ಥಳೀಯರು ಶೀತದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿ ತಪಾಸಣೆಗೆ ಒಳಪಟ್ಟಿದ್ದಾರೆ. ಸದ್ಯ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಸಹಿಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇನ್ನೊಂದೆಡೆ ಕಳೆದ 14 ದಿನಗಳ ಅವಧಿಯಲ್ಲಿಚೀನಾದಿಂದ ಆಗಮಿಸಿರುವ ಪ್ರವಾಸಿಗರಲ್ಲಿ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ವಿಮಾನ ನಿಲ್ದಾಣ ಆಯೋಗ್ಯ ಸಂಸ್ಥೆ ಮಾಹಿತಿ ನೀಡಿದೆ.