newsics.com
ಮಡಿಕೇರಿ: ಇದ್ದಕಿದ್ದಂತೆ ಒಮ್ಮೆಲೆ ಅನೇಕ ಮಂದಿಯಲ್ಲಿ ಕೆಮ್ಮು ಮತ್ತು ಕಣ್ಣಿನ ಉರಿ ಕಾಣಿಸಿಕೊಂಡಿದ್ದು, ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮಾಸ್ಕ್ ಧರಿಸುವಂತೆ ಸ್ಥಳೀಯರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಸಿದ್ದಾರೆ. ಕೆಲವರು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದಾರೆ.
ಆತಂಕದ ಕರೆಯ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅಲ್ಲಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆಯಲ್ಲಿ ಕೆಂಪು ಲಿಕ್ವಿಡ್ ಕಂಡುಬಂದಿದೆ. ಕೇರಳಕ್ಕೆ ತೆರಳುತ್ತಿದ್ದ ಟ್ರಕ್ ನಿಂದ ಇದು ಸೋರಿಕೆಯಾಗಿದ್ದು, ನಂತರದಲ್ಲಿ ಮಾಕುಟ ಚೆಕ್ ಪೋಸ್ಟ್ ಬಳಿ ಟ್ರಕ್ ಪರಿಶೀಲಿಸಿದಾಗ ಬ್ಯಾಡಗಿ ಮೆಣಸಿನಕಾಯಿಯ ಚಿಲ್ಲಿ ಸಾಸ್ ಎಂಬುದು ದೃಢಪಟ್ಟಿದೆ.
ಟ್ರಕ್ ವಶಕ್ಕೆ ಪಡೆದಿದ್ದು, FIR ದಾಖಲಿಸಲಾಗಿದೆ. ಚಿಲ್ಲಿ ಸಾಸ್ ಪರೀಕ್ಷೆಗಾಗಿ ಮೈಸೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ.