ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ನಂಟಿನ ತನಿಖೆ ನಡೆಸುತ್ತಿರುವ ಸಿಸಿಬಿ ಮುಂದೆ ನಟಿ ಐಂದ್ರಿತಾ ಮತ್ತು ಅವರ ಪತಿ ದಿಗಂತ್ ಕೆಲವೇ ಕ್ಷಣಗಳಲ್ಲಿ ಹಾಜರಾಗಲಿದ್ದಾರೆ. ಈ ತಾರಾ ದಂಪತಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸಿಸಿಬಿ ನಿರ್ಧರಿಸಿದೆ. ಈ ಸಂಬಂಧ ಪ್ರಶ್ನಾವಳಿ ಕೂಡ ಸಿದ್ದಪಡಿಸಲಾಗಿದೆ.
ಮೊದಲಿಗೆ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಅವರು ನೀಡಿದ ಉತ್ತರವನ್ನು ತಾಳೆ ಹಾಕಿದ ಬಳಿಕ ಜೊತೆಯಲ್ಲಿ ಕೂರಿಸಿ ಸ್ಪಷ್ಟೀಕರಣ ಪಡೆಯುವ ಸಾಧ್ಯತೆಯಿದೆ. ಇಬ್ಬರ ಹೇಳಿಕೆಯಲ್ಲಿನ ಸಮಾನ ಅಂಶಗಳು ಮತ್ತು ವ್ಯತಿರಿಕ್ತ ಅಂಶಗಳ ಆಧಾರದಲ್ಲಿ ತನಿಖೆ ನಡೆಯಲಿದೆ.
ಐಂದ್ರಿತಾ ವಿದೇಶಗಳಲ್ಲಿ ನಡೆಯುತ್ತಿರುವ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರ ಚಟುವಟಿಕೆ ಕುರಿತಂತೆ ಕೂಡ ಸಿಸಿಬಿ ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ