newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 48,049 ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂದು ಕೋವಿಡ್ನಿಂದ 22 ಮಂದಿ ಸಾವನ್ನಪ್ಪಿದ್ದು,18,115 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ. 19.23ರಷ್ಟಿದೆ. ಇಂದು 2,49,832 ಜನರು ಪರೀಕ್ಷೆಗೆ ಒಳಗಾಗಿದ್ದಾರೆ. ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲೇ 29,068 ಮಂದಿಗೆ ವೈರಸ್ ತಗುಲಿದ್ದು, ರಾಜಧಾನಿಯಲ್ಲಿ 06 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯಾದ್ಯಂತ 3,23,143 ಹಾಗೂ ಬೆಂಗಳೂರಲ್ಲಿ 2 ಲಕ್ಷ 23 ಸಾವಿರ ಸಕ್ರಿಯ ಪ್ರಕರಣಗಳಿವೆ.
ಮದುವೆಗೆ ಬರಬೇಡಿ, ಆಶೀರ್ವದಿಸಿ ಎಂದು ವಿಶಿಷ್ಟ ಕರೆಯೋಲೆ ಹಂಚಿದ ವಧು-ವರ