NEWSICS.COM
ಬೆಂಗಳೂರು:ಪಟಾಕಿ ಹೊಗೆಯಿಂದ ಕೊರೋನಾ ಹರಡುವಿಕೆ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕಾರಣಕ್ಕೆ ಪಟಾಕಿ ಬಳಸುವುದರ ಬಗೆಗಿನ ನಿರ್ಬಂಧ ಹೇರುವ ಕುರಿತು ತಜ್ಞರ ಸಮಿತಿ ವರದಿ ಇನ್ನೆರಡು ದಿನಗಳಲ್ಲಿ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಶೇ.16 ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸೆರೋ ಸರ್ವೆಯಲ್ಲಿ ತಿಳಿದುಬಂದಿದೆ. 2020 ರ ಸೆಪ್ಟೆಂಬರ್ 3 ರಿಂದ 16 ರವರೆಗೆ ದೆಹಲಿ ನಗರದ ಕೆಲ ಸ್ಥಳಗಳಲ್ಲಿ ಸರ್ವೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಎಲ್ಲ 30 ಜಿಲ್ಲೆಗಳಲ್ಲೂ ಸರ್ವೆ ನಡೆಸಲಾಗಿದೆ. ಸರ್ವೆ ಮಾಡುವಾಗ 27.3%ರಷ್ಟು ಜನರು ಸೋಂಕಿಗೆ ಒಳಗಾದವರಿದ್ದರು. ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಣ ಮಾಡಿ ಪರೀಕ್ಷೆ ನಡೆಸಲಾಗಿದೆ.
ಸೋಂಕಿತರ ಪ್ರಮಾಣಕ್ಕಿಂತ ಸಾವಿನ ಸಂಖ್ಯೆ ಕಡಿಮೆಯಿದೆ. ಡಿಸೆಂಬರ್ ಮತ್ತು ಮಾರ್ಚ್ ಅಂತ್ಯದಲ್ಲಿ ಇನ್ನೊಂದು ಸರ್ವೇ ನಡೆಸಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುಧಾಕರ್ ಹೇಳಿದ್ದಾರೆ.