Wednesday, November 30, 2022

ಸೆಪ್ಟೆಂಬರ್-ಅಕ್ಟೋಬರ್’ನಲ್ಲಿ ಮೂರನೇ ಅಲೆ ತೀವ್ರ

Follow Us

newsics.com
ನವದೆಹಲಿ: ಕೊರೋನಾ 2ನೇ ಅಲೆಯ ನಂತರ ಈಗ ಕೊರೋನಾ 3ನೇ ಅಲೆಯ ಆತಂಕ ಎದುರಾಗಿದೆ. ಈ ನಡುವೆ ಇಂದು (ಜೂನ್ 21) ಕಾನ್ಪುರದ ಐಐಟಿ ಪ್ರಕಟಿಸಿದ ಅಧ್ಯಯನದಲ್ಲಿ ಸೆಪ್ಟೆಂಬರ್​-ಅಕ್ಟೋಬರ್ ವೇಳೆಯಲ್ಲಿ ಕೊವಿಡ್​ಮೂರನೇ ಅಲೆ ತೀವ್ರ ಸ್ಥಿತಿಗೆ ತಲುಪಲಿದೆ ಎಂಬ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಅಧ್ಯಯನ ಮಾಡಿರುವ ಪ್ರೊ. ರಾಜೇಶ್ ರಂಜನ್ ಹಾಗೂ ಮಹೇಂದ್ರ ವರ್ಮ ಈ ವಿಚಾರದ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ 3 ಸಾಧ್ಯತೆಗಳನ್ನು ತಿಳಿಸಿದ್ದಾರೆ. ಮೊದಲ ಸಾಧ್ಯತೆಯಲ್ಲಿ ಜುಲೈ 15 ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಆದರೆ ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ.
ಎರಡನೇ ಸಾಧ್ಯತೆಯಲ್ಲಿ ಸಹಜ ಪರಿಸ್ಥಿತಿ ಇದ್ದು ವೈರಸ್​ ರೂಪಾಂತರಗೊಂಡರೆ ಮೂರನೇ ಅಲೆ ಉತ್ತುಂಗಕ್ಕೆ ತಲುಪುವಾಗ ಹೆಚ್ಚು ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಎರಡನೇ ಅಲೆಗಿಂತಲೂ ಅಧಿಕ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸೆಪ್ಟೆಂಬರ್​ನಲ್ಲೇ ಇದು ಉಂಟಾಗುವ ಸಾಧ್ಯತೆಯಿದೆ.
3ನೇ ಸಾಧ್ಯತೆಯಲ್ಲಿ ಕಠಿಣ ನಿಯಮಾವಳಿಗಳ ಪಾಲನೆಯಾದರೆ ಮೂರನೇ ಅಲೆ ಉತ್ತುಂಗಕ್ಕೆ ತಲುಪುವ ಸಮಯ ತಡವಾಗಲಿದೆ ಎಂದು ಹೇಳಲಾಗಿದೆ.

 

ಮೈತ್ರೀಂ ಭಜತ…

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!