newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ 70ನೇ ಹುಟ್ಟು ಹಬ್ಬ ಆಚರಿಸಿದರು. ಈ ಹಿನ್ನೆಲೆಯಲ್ಲಿ ವಿಶ್ವದ ಗಣ್ಯಾತಿಗಣ್ಯರು ಪ್ರಧಾನಿಗೆ ಶುಭ ಹಾರೈಸಿದರು. ಇದರಲ್ಲಿ ಸುಳ್ಯದ ಅಡ್ಯಾರಿನ ಯುವಕನೊಬ್ಬ ಕೂಡ ಸೇರಿದ್ದಾನೆ.
ಪ್ರಧಾನಿ ಮೋದಿ ಅವರಿಗೆ ವಿಶಿಷ್ಟ ರೀತಿಯಲ್ಲಿ ಅಡ್ಯಾರಿನ ಯುವಕ ಶಶಿ ಅಡ್ಯಾರ್ ಶುಭ ಕೋರಿದ್ದಾರೆ. ಅಶ್ವತ್ಥ ಎಲೆಯಲ್ಲಿ ಪ್ರಧಾನಿ ಚಿತ್ರ ಬಿಡಿಸಿದ್ದಾರೆ. ಅದನ್ನು ಅವರ ಸಹೋದರ ಸಂದೇಶ್ ಅಡ್ಯಾರ್ ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದರು. ಈ ಕಲಾ ನೈಪುಣ್ಯಕ್ಕೆ ಪ್ರಧಾನಿ ಮೋದಿ ಕೂಡ ಫಿದಾ ಆಗಿದ್ದಾರೆ.
ಅದನ್ನು ರೀಟ್ವೀಟ್ ಕೂಡ ಮಾಡಿದ್ದು, ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಳು ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ.