ಮೈಸೂರು: ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಮೈಸೂರು ಮೃಗಾಲಯದ ಚಿರತೆಯೊಂದನ್ನು ದತ್ತು ಸ್ವೀಕರಿಸಿದ್ದಾರೆ. ಈ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ. ಒಂದು ವರ್ಷದ ಅವಧಿಗೆ ವೇದ ಕೃಷ್ಣಮೂರ್ತಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ನಟ ಶಿವರಾಜ್ ಕುಮಾರ್ ಕೂಡ ಆನೆ ಮರಿಯೊಂದನ್ನು ಮೈಸೂರು ಮೃಗಾಲಯದಲ್ಲಿ ದತ್ತು ಸ್ವೀಕರಿಸಿದ್ದರು. ಇದು ಹಲವು ನಟ ನಟಿಯರಿಗೆ ಸ್ಫೂರ್ತಿ ನೀಡಿತ್ತು.