newsics.com
ಬೆಂಗಳೂರು: ಖ್ಯಾತ ಕ್ರಿಮಿನಲ್ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ತಾಯಿ ಅಕ್ಕಚ್ಚಮ್ಮ(95) ಭಾನುವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲ ದಿನಗಳ ಹಿಂದೆ ಕೋಮಾ ಸ್ಥಿತಿಗೆ ಜಾರಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದ ತಮ್ಮ ಸ್ವಗೃಹದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಕೊನೆಯುಸಿರೆಳೆದರು.
ಅವರಿಗೆ ಹಿರಿಯ ಪುತ್ರ ಸಿ.ಎಚ್.ಹನುಮಂತರಾಯ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಸೋಮವಾರ (14) ಬೆಳಗ್ಗೆ 11.30ಕ್ಕೆ ಚಿಕ್ಕಬೆಳವಂಗಲದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು (ಸಂಪರ್ಕ ಸಂಖ್ಯೆ: 96208-38498) ತಿಳಿಸಿವೆ.
ವಕೀಲ ಸಿ.ಎಚ್.ಹನುಮಂತರಾಯಗೆ ಮಾತೃವಿಯೋಗ
Follow Us