Tuesday, August 9, 2022

ನನ್ನ ನೋಡಾಕೆ ಮಗ ಬಂದೇ ಬರ್ತಾನೆ…

Follow Us

newsics.com
ಬೆಳಗಾವಿ: ‘ಮಗ ಎಲ್ಲಿಗೂ ಹೋಗಿಲ್ಲ, ಬಂದೇ ಬರುತ್ತಾನೆ’ ಎಂದು ರೋದಿಸುತ್ತಲೇ ಕಾದು ಕುಳಿತಿದ್ದಾರೆ ನಿನ್ನೆ ನಿಧನರಾದ ಕೇಂದ್ರ ಸುರೇಶ ಅಂಗಡಿಯವರ ತಾಯಿ ಸೋಮವ್ವ ಅಂಗಡಿ.
ಸದಾಶಿವ‌ಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸದಲ್ಲಿರುವ ಸೋಮವ್ವ ಅಂಗಡಿ ಮಗ ಸುರೇಶ ಅಂಗಡಿಯವರ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ. ‘ಮಗ ನನ್ನ ಬಿಟ್ಟು ಹೋಗಲ್ಲ.‌ ಪಾರ್ಲಿಮೆಂಟ್ ಮೀಟಿಂಗ್ ಮುಗಿಸಿ ಬರ್ತೀನಿ ಅಂತ ಹೇಳಿದ್ದಾನೆ.‌ ನನ್ನ ನನ್ನನ್ನು  ಭೇಟಿಯಾಗಲು ಬಂದೇ ಬರುತ್ತಾನೆ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ವಿಪರ್ಯಾಸವೆಂದರೆ, ಮಗನ ಅಂತಿಮ ದರ್ಶನಕ್ಕೂ ಸೋಮವ್ವ ಅಂಗಡಿ ಅವರಿಗೆ ಹೋಗಲಾಗುತ್ತಿಲ್ಲ.
ವಾಪಸ್ ಬರಲೇ ಇಲ್ಲ…
‘ಮೂವತ್ತು ವರ್ಷಗಳಿಂದ ಅವರ ಕಾರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ. 10ರಂದು ನಾನೇ ಸಾಂಬ್ರಾ ವಿಮಾನನಿಲ್ದಾಣಕ್ಕೆ ಹೋಗಿ ಅವರನ್ನು ಬಿಟ್ಟು ಬಂದಿದ್ದೆ. ಆದರೆ ಅವರು ವಾಪಸ್ ಬರಲೇ ಇಲ್ಲ…’ ಎನ್ನುತ್ತಾ ಮುದಕಪ್ಪ ನಾಯಕ ಅಳುತ್ತಿದ್ದಾರೆ.
‘ದೆಹಲಿಗೆ ಹೋದ ತಕ್ಷಣವೇ ಫೋನ್ ಮಾಡಿ ಹುಷಾರಾಗಿರುವಂತೆ ನನಗೆ ಸಲಹೆ ನೀಡಿದ್ದರು. ಎಂದಿಗೂ ನನ್ನನ್ನು ಕೆಲಸದವನು ಎಂದು ಅವರು ಭಾವಿಸಿರಲಿಲ್ಲ. ಕುಟುಂಬದವರಂತೆ ಕಾಣುತ್ತಿದ್ದರು. ಅವರ ಹಠಾತ್ ನಿಧನ ನೋವು ತಂದಿದೆ’ ಎಂದು ಕಣ್ಣೀರಿಟ್ಟರು. ಯಾರೇ ಇರಲಿ ಸಮಸ್ಯೆ ಹೇಳಿಕೊಂಡರೆ ಕೂಡಲೇ ಸ್ಪಂದಿಸುತ್ತಿದ್ದರು ಎಂದು ಮುದಕಪ್ಪ ನಾಯಕ ಅಂಗಡಿಯವರನ್ನು ನೆನೆದರು.

ಮತ್ತಷ್ಟು ಸುದ್ದಿಗಳು

vertical

Latest News

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...

ಯಾವುದೇ ಕಾರಣಕ್ಕೂ ಆಧಾರ್ ಒಟಿಪಿ ಶೇರ್ ಮಾಡಬೇಡಿ: ಸರ್ಕಾರದ ಎಚ್ಚರಿಕೆ

newsics.com ಬೆಂಗಳೂರು: ಆಧಾರ್ ಒಟಿಪಿ, ವೈಯಕ್ತಿಕ ಕಾರ್ಡ್ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಸರ್ಕಾರ ಎಚ್ಚರಿಸಿದೆ. ನಿಮ್ಮ ಆಧಾರ್ ಒಟಿಪಿಯನ್ನು ಕೇಳಿ ನಿಮಗೆ ಎಂದಿಗೂ ಕರೆ, SMS ಅಥವಾ ಇಮೇಲ್ ಬರುವುದಿಲ್ಲ ಎಂದು ಆಧಾರ್ ಕಾರ್ಡ್ ಸುರಕ್ಷತೆ...
- Advertisement -
error: Content is protected !!