Thursday, August 18, 2022

ಸೈಕ್ಲಿಂಗ್ ವೇಳೆ ಹೃದಯಾಘಾತ; ಮಾಜಿ ಶಾಸಕರ ಪುತ್ರ ಸಾವು

Follow Us

newsics.com
ಬಾಗಲಕೋಟೆ: ಬಾದಾಮಿ ಬಳಿ ಸೈಕ್ಲಿಂಗ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಅಮೆಚೂರ್ ಸೈಕ್ಲಿಸ್ಟ್ ವಿನೋದ ಪಾಟೀಲ (47) ಭಾನುವಾರ ಮೃತಪಟ್ಟಿದ್ದಾರೆ.
ವಿನೋದ ಪಾಟೀಲ, ಬೀಳಗಿಯ ಮಾಜಿ ಶಾಸಕ ಎಸ್.ಎಸ್.ಪಾಟೀಲರ ಪುತ್ರ. ವಿನೋದ ಪಾಟೀಲ ಅವರಿಗೆ ಪತ್ನಿ, ಪುತ್ರ ಇದ್ದಾರೆ.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದ ವಿನೋದ ಪಾಟೀಲ ಬಾಗಲಕೋಟೆ ಸೈಕ್ಲಿಂಗ್ ಕ್ಲಬ್ ಸದಸ್ಯರಾಗಿದ್ದರು. ಕ್ಲಬ್’ನ ಉಳಿದ ಸದಸ್ಯರೊಂದಿಗೆ ನಿತ್ಯ ಸೈಕ್ಲಿಂಗ್ ಹೋಗುತ್ತಿದ್ದರು. ಶನಿವಾರ 70 ಕಿ.ಮೀ. ದೂರ ಸೈಕ್ಲಿಂಗ್ ಮಾಡಿದ್ದರು.
ಭಾನುವಾರ ರಜೆ ಇರುವುದರಿಂದ 100 ಕಿ.ಮೀ. ಕ್ರಮಿಸುವುದಾಗಿ ಶನಿವಾರವಷ್ಟೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಎಂದಿನಂತೆಯೇ ಮುಂಜಾನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಮನೆಯಿಂದ ಸೈಕ್ಲಿಂಗ್‌ಗೆ ತೆರಳಿದ್ದರು.
ಬಾದಾಮಿ ತಾಲ್ಲೂಕಿನ ಕೆರೂರು ಬಳಿ ರಾಷ್ಟ್ರೀಯ 218ರಲ್ಲಿ ಸೈಕಲ್ ಓಡಿಸುವಾಗಲೇ ಹೃದಯಾಘಾತವಾಗಿ ವಿನೋದ ಕುಸಿದುಬಿದ್ದಿದ್ದಾರೆ. ಸೈಕ್ಲಿಂಗ್ ತಂಡದಲ್ಲಿ ಇದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಕೆರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಾರಿ ಮಧ್ಯೆಯೇ ವಿನೋದ ಸಾವಿಗೀಡಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೀಲಿಂಗ್ ವಿರೋಧಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ

ನೀಟ್ ಪರೀಕ್ಷೆಗೆ ಕ್ಷಣಗಣನೆ ಆರಂಭ: ತಮಿಳುನಾಡಿನಲ್ಲಿ ನಾಲ್ವರ ಆತ್ಮಹತ್ಯೆ

ಕೇಂದ್ರದ ಮಾಜಿ ಸಚಿವ ರಘುವಂಶ್‌ ಪ್ರಸಾದ್ ಸಿಂಗ್‌ ಇನ್ನಿಲ್ಲ

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...
- Advertisement -
error: Content is protected !!