ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈ ಪ್ರೊಫೈಲ್ ಮದುವೆ ಎಂದೇ ಪರಿಗಣಿಸಲಾಗಿರುವ ಡಿ ಕೆ ಶಿವಕುಮಾರ್ ಮಗಳು ಐಶ್ವರ್ಯಾ ಮದುವೆ ದಿನಾಂಕ ಅಂತಿಮ ಪಡಿಸಲಾಗಿದೆ. ಮುಂದಿನ ವರ್ಷ ಅಂದರೆ 2021 ಫೆಬ್ರವರಿ 14 ಇಲ್ಲವೇ 24ರಂದು ಮಗಳ ಮದುವೆ ನಡೆಸಲು ಡಿ ಕೆ , ಶಿವಕುಮಾರ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹೆಗ್ಡೆ ವರ. ಎಸ್ . ಎಂ. ಕೃಷ್ಣ ಅವರನ್ನು ಡಿ. ಕೆ. ಶಿವಕುಮಾರ್ ತಮ್ಮ ರಾಜಕೀಯ ಗುರು ಎಂದೇ ಗೌರವಿಸುತ್ತಿದ್ದಾರೆ. ಹೀಗಾಗಿ ಈ ಮದುವೆ ರಾಜಕೀಯವಾಗಿಯೂ ಅತ್ಯಂತ ಮಹತ್ವಪಡೆದುಕೊಂಡಿದೆ.