ನವದೆಹಲಿ: ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವುದರಲ್ಲಿ ಡಿ ಕೆ ಶಿವಕುಮಾರ್ ಕೊನೆಗೂ ಯಶಸ್ಸು ಗಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಅಧಿಕೃತ ಘೋಷಣೆ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್ ಸಂಕಷ್ಟದ ಸಮಯದಲ್ಲಿದ್ದಾಗ ತೋರಿಸಿದ್ದ ಪಕ್ಷ ನಿಷ್ಟೆ ಪರಿಗಣಿಸಿ, ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ವರಿಷ್ಟ ಮಂಡಳಿ ಈ ಸಂಕ್ರಾಂತಿ ಉಡುಗೊರೆ ನೀಡುವ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಅಹ್ಮದ್ ಪಟೇಲ್ ಅವರ ಬೆಂಬಲ, ಡಿ ಕೆ ಶಿವಕುಮಾರ್ ಅವರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ ಎಂದು ವರದಿಯಾಗಿದೆ.