Saturday, April 17, 2021

ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಇಬ್ಬರ ಹತ್ಯೆ, ದರೋಡೆ

newsics.com

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಮನೆಯಲ್ಲಿ ಇದ್ದ ಇಬ್ಬರನ್ನು ಹತ್ಯೆ ಮಾಡಿ ನಗ ನಗದು ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಸಂತೃಪ್ತಿನಗರದಲ್ಲಿ ಈ ಘಟನೆ ನಡೆದಿದೆ.

ಮೃತಪಟ್ಟವರನ್ನು ಮಮತಾ ಬಸು ಮತ್ತು ದೇವಬ್ರತಾ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಅವರಿಗೆ 75 ವರ್ಷ ಪ್ರಾಯವಾಗಿತ್ತು. ಕಳೆದ ಹಲವು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಸ್ವಂತ ಮನೆ ಹೊಂದಿದ್ದರು.

ದೇವಬ್ರತಾ ಮೂಲತ ಒಡಿಶಾ ದವರಾಗಿದ್ದರು. ಕೆಲಸ ಸಿಕ್ಕಿದ ಕಾರಣ ಬೆಂಗಳೂರಿಗೆ ಬಂದಿದ್ದರು. ದೇವಬ್ರತಾ , ಮಮತಾ ಬಸು ಅವರ ಪುತ್ರನ ಗೆಳೆಯರಾಗಿದ್ದರು.

ಮನೆಗೆ ನುಗ್ಗಿದ ದರೋಡೆಕೋರರು ಇಬ್ಬರನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಬೆಳೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನ

ಮತ್ತಷ್ಟು ಸುದ್ದಿಗಳು

Latest News

ಪ್ರಧಾನಿ ಮೋದಿ ಮನವಿ: ಕುಂಭಮೇಳ ಅಂತ್ಯ

newsics.com ಹರಿದ್ವಾರ: ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಹರಿದ್ವಾರದ ಕುಂಭಮೇಳವನ್ನು ಮೊಟಕುಗೊಳಿಸಲಾಗಿದೆ. ಈ ಕುರಿತು ಜುನಾ ಅಖಾಡದ ಸ್ವಾಮಿ ಅವಧೇಶಾನಂದ ಗಿರಿ ಅವರು ಶನಿವಾರ (ಏ.17)...

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  11,41,998  ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಹೊಸದಾಗಿ 11,...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...
- Advertisement -
error: Content is protected !!