ಬೆಂಗಳೂರು: ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಲು ಮುಂದಾಗಿದ್ದ ತಂದೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಂದಾಗಿದ್ದ ಬಾಲಕಿಯಿಂದಲೇ ತಂದೆ ಕೊಲೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಮೈಕೋ ಲೇಔಟ್ನ ಸಪ್ತಿಕ್ ಬ್ಯಾನರ್ಜಿ (45) ಮೃತ ದುರ್ದೈವಿ. ಮೈಕೋ ಲೇಔಟ್ನ ಮಾರುತಿ ಪ್ಯಾರಡೈಸ್ ಅಪಾರ್ಟ್ಮೆಂಟ್ನಲ್ಲಿ ಸಪ್ತಿಕ್ ಬ್ಯಾನರ್ಜಿ 15 ವರ್ಷದ ಮಗಳು ಹಾಗೂ 12 ವರ್ಷದ ಮಗನ ಜೊತೆ ವಾಸವಾಗಿದ್ದರು.
ಮೂರ್ನಾಲ್ಕು ವರ್ಷದ ಹಿಂದೆ ಸಪ್ತಿಕ್ ಬ್ಯಾನರ್ಜಿ ಪತ್ನಿ ಮೃತಪಟ್ಟಿದ್ದರು. ಆ ನೋವಿನಲ್ಲಿದ್ದ ಸಪ್ತಿಕ್ ಖಿನ್ನತೆಗೊಳಗಾಗಿ, ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಹೀಗೆ ಕುಡಿದು ಬಂದ ಸಪ್ತಿಕ್ ಮಕ್ಕಳ ಜತೆ ಗಲಾಟೆ ಮಾಡ್ತಿದ್ದರು ಎನ್ನಲಾಗಿದೆ. ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ ಸಪ್ತಿಕ್ ಕೆಲವೊಮ್ಮೆಕುಡಿದು ಹಲ್ಲೆ ಕೂಡ ಮಾಡುತ್ತಿದ್ದರು.
3 ಮದುವೆಯಾದ ಈ ಸೆಕ್ಸ್ ಕ್ವೀನ್ ಹೆಣ್ಮಕ್ಕಳಿಗೆ ಮಾತ್ರ ಶಾಪ!
ಪಿಯಾನೋ ಕೀ ಬೋರ್ಡ್ ವಾದಕರಾಗಿದ್ದ ಮೃತ ಸಪ್ತಿಕ್, ಬುಧವಾರ ಮಧ್ಯರಾತ್ರಿ ಕುಡಿದು ಬಂದು ಜೋರಾಗಿ ಪಿಯಾನೋ ನುಡಿಸ್ತಿದ್ದರು.
ಇದನ್ನು ಗಮನಿಸಿದ ಪುತ್ರಿ ಮಧ್ಯರಾತ್ರಿಯಲ್ಲಿ ಪಿಯಾನೋ ನುಡಿಸದಂತೆ ತಿಳಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸಪ್ತಿಕ್, ತನ್ನ ಮಗಳನ್ನು ಚಾಕುವಿನಿಂದ ತಿವಿಯಲು ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಮಗಳು ತಂದೆಯನ್ನು ಜೋರಾಗಿ ತಳ್ಳಿದ್ದಾಳೆ. ಆಗ ಕಾಲು ಜಾರಿ ಬಿದ್ದ ಸಪ್ತಿಕ್ಗೆ ಎದೆಗೆ ಚಾಕು ಚುಚ್ಚಿಕೊಂಡಿದ್ದು ರಕ್ತಸ್ರಾವದಿಂದ ಸಪ್ತಿಕ್ ಸಾವನ್ನಪ್ಪಿದ್ದಾನೆ. ಮೈಕೋ ಲೇಔಟ್ ಠಾಣೆ ಪೊಲೀಸರು ಐಪಿಸಿ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.