newsics.com
ಚಿತ್ರದುರ್ಗ/ ಬೆಂಗಳೂರು: ದಲಿತ ಚಳವಳಿಯ ಮುಂಚೂಣಿ ನಾಯಕ ಚಿತ್ರದುರ್ಗದ ಎಂ.ಜಯಣ್ಣ (70) ಸೋಮವಾರ ರಾತ್ರಿ (ನ.9) ಬೆಂಗಳೂರಿನಲ್ಲಿ ನಿಧನರಾದರು.
ನೀರಾವರಿ ಹೋರಾಟಗಾರ ಜಯಣ್ಣ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಚಿತ್ರದುರ್ಗ ನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರೊ.ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿದ್ದ ಜಯಣ್ಣ, ಚಂದ್ರಗುತ್ತಿ ಬೆತ್ತಲೆ ಸೇವೆ, ಕಂಬಾಲಪಲ್ಲಿ ದಲಿತ ಹತ್ಯೆ, ಮೌಢ್ಯಾಚಾರಣೆ ಸೇರಿ ಹಲವು ಹೋರಾಟಗಳಲ್ಲಿ ಭಾಗಿಯಾಗಿ, ರಾಜ್ಯದ ವಿವಿಧೆಡೆ ಕಾಲ್ನಡಿಗೆ ಜಾಥಾ ನಡೆಸಿದ್ದರು.
ದಲಿತ ಚಳವಳಿ ನಾಯಕ ಜಯಣ್ಣ ಇನ್ನಿಲ್ಲ
Follow Us