newsics.com
ಮೈಸೂರು: ಪ್ರತಿವರ್ಷ ನಾಡಹಬ್ಬ ದಸರಾ ಮುಗಿದ ಬಳಿಕ ಮೈಸೂರು ಅರಮನೆಯ ದೀಪಾಲಂಕಾರ ಕೂಡ ಕೊನೆಗೊಳ್ಳುತ್ತಿತ್ತು. ಆದರೆ ಈ ಬಾರಿ ದಸರಾ ದೀಪಾಲಂಕಾರವನ್ನು ಇನ್ನಷ್ಟು ದಿನ ಮುಂದುವರಿಸಲು ನಿರ್ಧರಿಸಲಾಗಿದೆ.
ಇಂದಿನಿಂದ 9 ದಿನ ದಸರಾ ದೀಪಾಲಂಕಾರ ಮುಂದುವರಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
“ಮೈಸೂರು ದಸರಾದ ದೀಪಾಲಂಕಾರವನ್ನು ಕೆಲ ದಿನ ಮುಂದುವರಿಸಬೇಕು ಎಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಹೀಗಾಗಿ ಇಂದಿನಿಂದ 9 ದಿನಗಳ ಕಾಲ ದೀಪಾಲಂಕಾರ ಹೀಗೆಯೇ ಮುಂದುವರಿಯಲಿದೆ” ಎಂದು ಬೊಮ್ಮಾಯಿ ತಿಳಿಸಿದ್ದಾರೆ.