Monday, August 8, 2022

ಪ್ಯಾರಾ ಮೋಟಾರ್ ಕಡಲಿಗೆ ಬಿದ್ದು ನೌಕಾದಳ ಅಧಿಕಾರಿ ಸಾವು, ಪೈಲಟ್ ಪಾರು

Follow Us

newsics.com
ಕಾರವಾರ: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಪ್ಯಾರಾ ಮೋಟಾರ್ ಗಾಳಿಯ ರಭಸಕ್ಕೆ ಸುತ್ತಿಕೊಂಡು ನಗರದ ಟ್ಯಾಗೋರ್ ಕಡಲಿನಲ್ಲಿ ಬಿದ್ದಿದೆ. ಘಟನೆಯಲ್ಲಿ ಭಾರತೀಯ ನೌಕಾದಳದ ಕಮಾಂಡೆಂಟ್ ಮೃತಪಟ್ಟಿದ್ದರೆ, ಪೈಲಟ್ ಅವರನ್ನು ರಕ್ಷಣೆ ಮಾಡಲಾಗಿದೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಮಾಂಡೆಂಟ್ ಆಗಿದ್ದ ಆಂಧ್ರ ಮೂಲದ ಮಧುಸೂದನ ರೆಡ್ಡಿ (56) ದುರಂತದಲ್ಲಿ ಮೃತಪಟ್ಟವರು. ತಮ್ಮ ಬೆಂಗಳೂರು ಮೂಲದ ಸ್ನೇಹಿತರೊಂದಿಗೆ ಪ್ಯಾರಾ ಮೋಟಾರಿಂಗ್ ಮಾಡಲು ಟ್ಯಾಗೋರ್ ಕಡಲತೀರಕ್ಕೆ ಬಂದಿದ್ದರು. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರ ಕುಟುಂಬದವರೆಲ್ಲ ಪ್ಯಾರಾ ಮೊಟಾರಿಂಗ್ ಮಾಡಿದ ಬಳಿಕ ಕೊನೆಯಲ್ಲಿ ಪೈಲಟ್ ವಿದ್ಯಾಧರ್ ವೈದ್ಯ ಅವರ ಜತೆಗೂಡಿ ರೆಡ್ಡಿ ಅವರು ಕೂಡ ಮೋಟಾರಿಂಗ್ ನಲ್ಲಿ ಹಾರಾಟ ನಡೆಸುತ್ತಿದ್ದರು. ಈ ವೇಳೆ, ಗಾಳಿಯ ರಭಸಕ್ಕೆ ಪ್ಯಾರಾ ಮೋಟಾರ್ ನ ಪ್ಯಾರಾಚೂಟ್ ಸುತ್ತಿಕೊಂಡಿದ್ದರಿಂದ ಇಬ್ಬರೂ ಸಮುದ್ರದಲ್ಲಿ ಬಿದ್ದಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದವರು, ಮೀನುಗಾರರು ದೋಣಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ಪೈಲಟ್ ಅನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪ್ಯಾರಾ ಮೊಟಾರ್ ನ ದಾರ ಕಾಲಿಗೆ ಸುತ್ತಿಕೊಂಡಿದ್ದರಿಂದ ಸಮುದ್ರದಿಂದ ಮೇಲೇಳಲಾರದೆ ರೆಡ್ಡಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

newsics.com ಬೆಂಗಳೂರು: ನಗರದ ಪ್ರತಿಷ್ಟಿತ ಪಬ್ ನಲ್ಲಿ  ಕಿರುತೆರೆ ನಟ ಸುನಾಮಿ ಕಿಟ್ಟಿ ಮತ್ತು ಗೆಳೆಯರು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಬ್ಬನ್ ಪಾರ್ಕ್  ಠಾಣೆ...

ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಕಸರತ್ತು

newsics.com ಪಾಟ್ನ: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಮೈತ್ರಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಸಂಯುಕ್ತ ಜನತಾ ದಳದ ಮಹತ್ವದ ಚರ್ಚೆ ಪಾಟ್ನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ  ಜೆಡಿಯುವಿನ ಸಂಸದರು, ಶಾಸಕರು  ಸೇರಿದಂದೆ...

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಹತ್ಯೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ...
- Advertisement -
error: Content is protected !!