ಬೆಂಗಳೂರು: ವ್ಯಾಪಾರ ಕುಸಿತ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ (ಸಿಸಿಡಿ) ಮತ್ತೆ 280 ಮಳಿಗೆಗಳನ್ನು ಮುಚ್ಚಲು ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಸುಮಾರು 500 ಕೆಫೆಗಳನ್ನು ಈಗಾಗಲೇ ಮುಚ್ಚಿದೆ.
ಲಾಭದಾಯಕತೆ, ಪ್ರಮುಖ ಖರ್ಚಿನಲ್ಲಿ ಭವಿಷ್ಯದ ಹೆಚ್ಚಳ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು 280 ಮಳಿಗೆಗಳನ್ನು ಮುಚ್ಚಲು ಮುಂದಾಗಿದೆ. ಕಳೆದ ವರ್ಷ, ಕಂಪನಿಯು ಏಪ್ರಿಲ್-ನವೆಂಬರ್ 2019 ರ ಅವಧಿಯಲ್ಲಿ ಇದೇ ಕಾರಣದಿಂದ ಸುಮಾರು 500 ಕೆಫೆಗಳನ್ನು ಮುಚ್ಚಿದೆ. ಈ ಮೂಲಕ ಸಿಸಿಡಿ ಮಳಿಗೆಗಳ ಒಟ್ಟು ಸಂಖ್ಯೆ ಜೂನ್ 30ರ ವೇಳೆಗೆ 1,480 ಸಿಸಿಡಿ ಮಳಿಗೆಗಳಿವೆ.
ತಾನೇ ಜಾಲಿ ರೈಡ್ ವಿಡಿಯೋ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ!
ಈ ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ಕಾಫಿ ದಿನಕ್ಕೆ ಸರಾಸರಿ ಮಾರಾಟದಲ್ಲಿ (ಎಎಸ್ಪಿಡಿ) 15,445 ಕ್ಕೆ ಇಳಿದಿದೆ ಎಂದು ವರದಿ ಮಾಡಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 15,739 ರಷ್ಟಿತ್ತು. ಕಂಪನಿಯು ಈಗಾಗಲೇ ತನ್ನ ರಫ್ತು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಅಕಾಲಿಕ ನಿಧನದ ನಂತರ ಕಾಫಿ ಡೇಗೆ ಹಿನ್ನಡೆಯಾಗಿದೆ.