Wednesday, October 5, 2022

ದೀಪ್ತಿ ಭದ್ರಾವತಿಯವರಿಗೆ ವಿಭಾ ಸಾಹಿತ್ಯ ಪುರಸ್ಕಾರ

Follow Us

newsics.com
ಹುಬ್ಬಳ್ಳಿ: ಪ್ರಸಿದ್ಧ ಕಥೆಗಾರ್ತಿ, ಕವಯಿತ್ರಿ ದೀಪ್ತಿ ಭದ್ರಾವತಿ ಅವರ ‘ಅಷ್ಟೇ’ ಕವನ ಸಂಕಲನಕ್ಕೆ ವಿಭಾ ಸಾಹಿತ್ಯ ಪುರಸ್ಕಾರ ಲಭಿಸಿದೆ.
2020ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ದೀಪ್ತಿಯವರ ‘ಅಷ್ಟೇ’ ಕವನ ಸಂಕಲನದ ಹಸ್ತಪ್ರತಿ ಭಾಜನವಾಗಿದ್ದು, ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಫಲಕವನ್ನೊಳಗೊಂಡಿದೆ. ದೀಪ್ತಿಯವರ ‘ಕಾಗದದ ಕುದುರೆ’ ಮೊದಲ ಕೃತಿ. ‘ಗ್ರೀನ್ ರೂಮಿನಲ್ಲಿ’ ಎರಡನೇ ಕೃತಿಯಾಗಿದ್ದು, ಎರಡೂ ಕೃತಿಗಳೂ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿವೆ.
ಕರಾವಳಿ ನಾಡಿನ ಮರವಂತೆಯವರಾದ ದೀಪ್ತಿ ಪ್ರಸ್ತುತ ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಆರೋಗ್ಯ ಇಲಾಖೆಯ ಉದ್ಯೋಗಿಯಾಗಿರುವ ದೀಪ್ತಿ, ಸದ್ಯ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಡಿಪ್ಲೊಮಾ, ಕನ್ನಡ ಸ್ನಾತಯೋತ್ತರ ಪದವೀಧರೆಯಾಗಿರುವ ದೀಪ್ತಿ ಹಿಂದಿಯಲ್ಲಿ ವಿಶಾರದ ಪದವಿ ಹೊಂದಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!