newsics.com
ಬೆಂಗಳೂರು: ಮದುವೆಯಾಗುವಂತೆ ವೈದ್ಯನೊಬ್ಬ ಪದೇ ಪದೇ ಕಿರುಕುಳ ನೀಡುತ್ತಿದ್ದ ಕಾರಣ ಮನನೊಂದ ದಂತ ವೈದ್ಯೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿದ್ದ ಪ್ರಿಯಾಂಶಿ ಆತ್ಮಹತ್ಯೆಗೆ ಶರಣಾಗಿರುವ ವೈದ್ಯೆ
ಸುಮಿತ್ ಎಂಬ ವೈದ್ಯ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಎಂದು ಪ್ರಿಯಾಂಶಿ ಅವರ ತಂದೆ ಸುಶೀಲ್ ತ್ರಿಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ದಂತ ವೈದ್ಯೆ ಪ್ರಿಯಾಂಶಿ ಅವರ ನಡತೆ ಬಗ್ಗೆ ವೈದ್ಯ ಸುಮಿತ್ ಕೆಟ್ಟದ್ದಾಗಿ ಮಾತನ್ನಾಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.