newsics.com
ಬೆಂಗಳೂರು: ತೈಲ ಮಾರಾಟ ಕಂಪನಿಗಳು ಸತತ ಏಳನೇ ದಿನವೂ ಇಂಧನ ದರ ಹೆಚ್ಚಿಸಿದ್ದು, ರಾಜ್ಯದಲ್ಲಿ ಡೀಸೆಲ್ ದರವು ಲೀಟರಿಗೆ 100 ರೂ. ಗಡಿ ದಾಟಿದೆ. ಕರ್ನಾಟಕ ಸೇರಿದಂತೆ ಕೇರಳದಲ್ಲಿಯೂ ಡೀಸೆಲ್ ದರ ಲೀಟರಿಗೆ 100 ರೂ. ಗಡಿ ದಾಟಿದೆ. ಒಡಿಶಾ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಲೇಹ್ ನಲ್ಲಿ ಈಗಾಗಲೇ ಡೀಸೆಲ್ ದರ 100 ರೂ.ಗೂ ಅಧಿಕ ಬೆಲೆಗೆ ಮಾರಾಟ ಆಗುತ್ತಿದೆ.
ಇಂದು ಪೆಟ್ರೋಲ್ ದರವನ್ನು ಲೀಟರಿಗೆ 30 ಪೈಸೆ ಮತ್ತು ಡೀಸೆಲ್ ದರವನ್ನು ಲೀಟರಿಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ ಹೆಚ್ಚಳವಾಗುತ್ತಿದೆ.
ದಾವಣಗೆರೆಯಲ್ಲಿ ಡೀಸೆಲ್ ದರ ಲೀಟರಿಗೆ ರೂ.100.34ರಷ್ಟಾಗಿದ್ದು, ಪೆಟ್ರೋಲ್ ದರ ಲೀಟರಿಗೆ ರೂ.109.79ರಷ್ಟಿದೆ. ಶಿವಮೊಗ್ಗದಲ್ಲಿ ಡೀಸೆಲ್ ದರ ಲೀಟರಿಗೆ ರೂ.100.12ಕ್ಕೆ ಏರಿಕೆ ಆಗಿದ್ದು, ಪೆಟ್ರೋಲ್ ದರ ಲೀಟರಿಗೆ ರೂ.109.51ರಷ್ಟಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ರೂ. 98.85 ಮತ್ತು ಪೆಟ್ರೋಲ್ ದರ ರೂ.108.04ಕ್ಕೆ ಏರಿಕೆ ಆಗಿದೆ.