newsics.com
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ.
ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ ಈ ಜಾತ್ರೆಯಲ್ಲಿ ಭಕ್ತರು ದೇವರಿಗೆ ನಮಿಸಲು ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಳ್ತಾರೆ. ಹೀಗೆ ಗ್ರಾಮದ ಬಹುತೇಕರು ವಿಶೇಷ ರೀತಿಯಲ್ಲಿ ದೇವರಿಗೆ ನಮಸ್ಕರಿಸುತ್ತಾರೆ.
ಮೂರು ಬಾರಿ ಓಡೋಡಿ ಬಂದು ಬಂಡೆಗೆ ತಲೆ ಹೊಡೆದುಕೊಂಡು ನಮಸ್ಕಾರ ಮಾಡಬೇಕಂತೆ. ಹೀಗೆ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಇದೆ.
ತಲೆಗೆ ಗಾಯ, ತಲೆ ನೋವು ಯಾವುದೇ ಸಮಸ್ಯೆ ಆಗಲ್ಲವಂತೆ. ಇದನ್ನ ಸೋಮೇಶ್ವರ ದೇವರ ಪವಾಡ ಎನ್ನಲಾಗ್ತಿದೆ. ಅದೇಷ್ಟೋ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದರು ಈ ವರೆಗೆ ಯಾರೊಬ್ಬರೂ ಸಣ್ಣ ಗಾಯವಾಗಿಲ್ಲ