ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಅವರ ಪುತ್ರಿ ರೋಹಿಣಿ ಸಿಂಗ್ ಮತ್ತು ಜೈ ಜಗದೀಶ್ ಅವರ ಮಗಳು ಅರ್ಪಿತಾ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಲಹಂಕ- ಮಾವಳ್ಳಿಪುರ ರಸ್ತೆ ಮಧ್ಯೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಕಾರಿನಲ್ಲಿ ರೋಹಿಣಿ ಸಿಂಗ್ ಮತ್ತು ಅರ್ಪಿತಾ ಪ್ರಯಾಣಿಸುತ್ತಿದ್ದರು.
ಎರಡು ದಿನಗಳ ಹಿಂದೆ ಈ ಘಟನೆ ಸಂಭವಿಸಿದ್ದರೂ ಇದೀಗ ಬೆಳಕಿಗೆ ಬಂದಿದೆ