ರಾಮನಗರ: ಕೊರೋನಾ ಸೋಂಕಿಗೆ ಬೆಂಗಳೂರು ಮೂಲದ ವೈದ್ಯರೊಬ್ಬರು ಬಲಿಯಾಗಿದ್ದಾರೆ.
ರಾಮನಗರ ಜಿಲ್ಲೆಯ ಸರ್ಕಾರಿ ವೈದ್ಯ ಮಂಜುನಾಥ್ (50) ಮೃತಪಟ್ಟರು. ಬೆಂಗಳೂರಿನವರಾದ ಅವರು ಕಳೆದ ಐದು ವರ್ಷದಿಂದ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
24 ಗಂಟೆಯಲ್ಲಿ ದೇಶದಲ್ಲಿ 45,720 ಮಂದಿಗೆ ಸೋಂಕು, 1,130 ಮಂದಿ ಸಾವು
ತಿಂಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಅವರು 20 ದಿನದ ಹಿಂದೆಯೇ ಪ್ರಜ್ಞಾಶೂನ್ಯರಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಕೊನೆಯುಸಿರೆಳೆದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.