newsics.com
ಉಡುಪಿ: ಮನೆಯ ಸಾಕುನಾಯಿಯೊಂದು ಕಣ್ಮರೆಯಾದ ಯುವಕನೊಬ್ಬನನ್ನು ಹುಡುಕಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕನ ಮಗ ವಿವೇಕಾನಂದ ನಾಪತ್ತೆಯಾದಾತ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಸಾಕು ನಾಯಿ ಕೂಡ ವಿವೇಕಾನಂದನ ಜತೆಗೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ, ಅನ್ನ ಆಹಾರವಿಲ್ಲದೆ ಪರದಾಡಿದ್ದ.
ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಆದರೆ, ಮನೆಯ ನಾಯಿಯ ಸಹಾಯದಿಂದ ಯುವಕ ಊರಿಗೆ ಮರಳಿದ್ದು ನಿತ್ರಾಣಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
https://newsics.com/entertainment/actress-manvitha-kamath-new-photo/161659/