newsics.com
ಕೊಪ್ಪಳ: ಮನೆ ಮಂದಿಯ ಮುದ್ದಿನ ನಾಯಿ ಮರಿ ಮಾಲೀಕನ 20 ಗ್ರಾಂ ತೂಕದ ಚಿನ್ನದ ಸರವನ್ನು ನುಂಗಿ ಹಾಕಿದೆ. ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ದಿಲೀಪ್ ಕುಮಾರ್ ಹಿರೇಮಠ್ ಎಂಬವರ ಪಮೋರಿಯನ್ ತಳಿಗೆ ಸೇರಿದ ನಾಯಿ ಮರಿ ಚಿನ್ನದ ಸುರ ನುಂಗಿದೆ. ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದಿಲೀಪ್ ಕುಮಾರ್ ಅವರು ತೆಗೆದಿರಿಸಿದ್ದರು.
ಬೆಳಿಗ್ಗೆ ನೋಡಿದಾಗ ಸರ ನಾಪತ್ತೆಯಾಗಿತ್ತು.
ನಾಯಿಯ ಬಳಿ ಚಿನ್ನದ ತುಂಡು ಪತ್ತೆಯಾಗಿತ್ತು. ಬಳಿಕ ಪಶು ವೈದ್ಯರಲ್ಲಿ ತೋರಿಸಿದಾಗ ನಾಯಿ ಚಿನ್ನದ ಸರ ನುಂಗಿರುವುದು ದೃಢಪಟ್ಟಿದೆ.
ಇದೀಗ ನಾಯಿಯ ಮಲದಲ್ಲಿ ಚಿನ್ನದ ಕೆಲವು ತುಂಡುಗಳು ಹೊರ ಬಂದಿವೆ. ಉಳಿದ ಚಿನ್ನ ಕೂಡ ಹೊರಬರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.