ಮೈಸೂರು: ಕೊರೋನಾ ಮನೆಯಿಂದ ಹೊರಬರೋದಿಕ್ಕೆ ಭಯವಾಗೋ ವಾತಾವರಣ ಸೃಷ್ಟಿಸಿದೆ. ಈ ವಾತಾವರಣವನ್ನೇ ವ್ಯಾಪಾರದ ಅಭಿವೃದ್ಧಿಗೆ ಬಳಸಿಕೊಂಡ ಮೈಸೂರು ಹಾಪ್ಕಾಮ್ಸ್ ನಗರದಾದ್ಯಂತ ಆನ್ಲೈನ್ ತರಕಾರಿ-ಹಣ್ಣು ಪೊರೈಕೆ ಯೋಜನೆ ಆರಂಭಿಸಿದೆ.
ಆಸಕ್ತ ಗ್ರಾಹಕರು ಹಾಪ್ ಕಾಮ್ಸ್ ಆನ್ಲೈನ್ ಮೊಬೈಲ್ ಆಪ್ ಮೂಲಕ ತರಕಾರಿ,ಹಣ್ಣು, ಸಾವಯವ ಬೆಲ್ಲ,ಸೊಪ್ಪುಗಳನ್ನು ನೋಡಿ ಆಯ್ಕೆಮಾಡಿಕೊಂಡ ವಸ್ತುಗಳಿಗೆ ಆರ್ಡರ್ ನೀಡಬಹುದು. ತರಕಾರಿ-ಹಣ್ಣು ಪೊರೈಸಿದ ಬಳಿಕ ಹಣ ನೀಡುವ ವ್ಯವಸ್ಥೆಯೂ ಇದೆ.
ಮುಂಗಡವಾಗಿ ತರಕಾರಿ-ಹಣ್ಣು ಬುಕ್ ಮಾಡಿ ಸೇವೆ ಪಡೆದುಕೊಳ್ಳಬೇಕು. ಈಗಾಗಲೇ ಮೈಸೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದು ಸೇವೆ ಪಡೆದುಕೊಳ್ಳುತ್ತಿದ್ದಾರೆ.
ವಿವಿಧ ಬಗೆಯ ಸೊಪ್ಪುಗಳು,ಡ್ರೈಪ್ರೂಟ್ಸ್,ತೆಂಗಿನಕಾಯಿ,ಮೊಟ್ಟೆ,ಸಾವಯವ ಬೆಲ್ಲ,ಜೇನುತುಪ್ಪ,ಹಣ್ಣಿನ ಸಸಿಗಳು,ಹೂವು ಹೀಗೆ ನೂರಾರು ವಸ್ತುಗಳನ್ನು ಬೇಡಿಕೆ ಮೇರೆಗೆ ಹಾಪ್ ಕಾಮ್ಸ್ ಸಪ್ಲೈ ಮಾಡುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 8277814143 ದೂರವಾಣಿ ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.
ಮೈಸೂರಿನಲ್ಲಿ ಮನೆ ಬಾಗಿಲಿಗೆ ಬರಲಿದೆ ಹಣ್ಣು-ತರಕಾರಿ
Follow Us