ಬೆಂಗಳೂರು; ಸಂಸತ್ತು ಕಲಾಪಗಳ ಪ್ರಸಾರದ ಮಾದರಿಯಲ್ಲೇ ಫೆ. 17ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಕಲಾಪದ ನೇರ ಪ್ರಸಾರ ಹಾಗೂ ಇತರ ವಾಹಿನಿಗಳಿಗೆ ಚಿತ್ರೀಕರಿಸಿದ ದೃಶ್ಯಗಳನ್ನು ಸ್ಯಾಟಲೈಟ್ ಮೂಲಕ ಒದಗಿಸುವ ಜವಾಬ್ದಾರಿಯನ್ನು ದೂರದರ್ಶನ ವಾಹಿನಿಗೆ ವಹಿಸಲಾಗಿದೆ.
ವಿಧಾನಸಭಾ ಕಲಾಪಕ್ಕೆ ದೃಶ್ಯ ಮಾಧ್ಯಮದ ಕ್ಯಾಮೆರಾಗಳಿಗೆ ಅವಕಾಶ ನಿರಾಕರಿಸಿರುವ ಸರ್ಕಾರ ಈ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಜೊತೆಗೆ, ಮುದ್ರಣಾ ಮಾಧ್ಯಮಗಳ ಛಾಯಾಗ್ರಾಹಕರಿಗೂ ನಿರ್ಬಂಧ ವಿಧಿಸಲಾಗಿದ್ದು, ಕಲಾಪದ ಚಿತ್ರಗಳನ್ನು ಪೂರೈಸುವ ಜವಾಬ್ದಾರಿಯನ್ನು ವಾರ್ತಾ ಇಲಾಖೆಗೆ ವಹಿಸಿ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.