ಬೆಂಗಳೂರು: ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಸ್ಯಾಂಡಲ್ ವುಡ್ ಗಾಯಕಿ ಸುಷ್ಮಿತಾ, ಮಾಳಗಾಳದ ತಮ್ಮ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಕನ್ನಡ ಸಿನಿಮಾ, ಧಾರಾವಾಹಿ, ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ 26 ವರ್ಷದ ಸುಷ್ಮಿತಾ ರಾಜೇ, ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.. ಇದಕ್ಕೂ ಮುನ್ನ ಅವರು ತಮ್ಮ ಸೋದರ ಸಚಿನ್ ಮೊಬೈಲ್ ಗೆ ಡೆತ್ ನೋಟ್ ವಾಟ್ಸಾಪ್ ಮಾಡಿದ್ದಾರೆ. .
ನನ್ನ ಸಾವಿಗೆ ಪತಿ ಶರತ್ ವೈದೇಹಿ, ಅವರ ತಾಯಿ ಗೀತಾ ನೇರವಾಗಿ ಕಾರಣರಾಗಿರುತ್ತಾರೆ. ಎಷ್ಟು ಬೇಡಿಕೊಂಡು ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಅದಕ್ಕೆ ತವರಿಗೆ ಮರಳಿದ್ದೆ ಎಂದಿದ್ದಾರೆ.