Monday, April 12, 2021

ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಡಾ. ಯು.ಬಿ ರಾಜಲಕ್ಷ್ಮಿ ಆಯ್ಕೆ

ಬೆಂಗಳೂರು: 2020ನೇ ಸಾಲಿನ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಯು.ಬಿ ರಾಜಲಕ್ಷ್ಮಿ ಭಾಜನರಾಗಿದ್ದಾರೆ.
ಕನ್ನಡದ ವಾರಪತ್ರಿಕೆ ‘ತರಂಗ’ದ ಸಂಪಾದಕಿಯಾಗಿರುವ ಡಾ. ಯು. ಬಿ. ರಾಜಲಕ್ಷ್ಮಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರು. ಕಳೆದ 37 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸಕ್ರಿಯರಾಗಿರುವ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಮಹಿಳಾ ಪತ್ರಕರ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಮುಂಗಾರು’, ‘ಹೊಸ ದಿಗಂತ’, ‘ಟೈಮ್ಸ್ ಆಫ್ ಡೆಕ್ಕನ್’ ದಿನಪತ್ರಿಕೆಗಳಲ್ಲಿ 1983ರಲ್ಲಿ ಕಾರ್ಕಳದ ವರದಿಗಾರ್ತಿಯಾಗಿದ್ದರು. 1987 ರಲ್ಲಿ ‘ಮಣಿಪಾಲ ಮೀಡಿಯಾ ನೆಟ್‌ವರ್ಕ್’ನ ‘ತರಂಗ’ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ, ಪ್ರಸ್ತುತ ಸಂಪಾದಕಿಯಾಗಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!