newsics.com
ಬೆಂಗಳೂರು: ನಗರದಲ್ಲಿ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಆಫ್ರಿಕಾ ಪ್ರಜೆ ಸೇರಿ ಇಬ್ಬರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಫ್ರಿಕಾ ಮೂಲದ ಜಾನ್ ಎರಿಕ್ ಅಸ್ರಿನ್ (25) ಮತ್ತು ಮುಂಬೈನ ಬೊವಾಸ್ ಶಾಜೀ (27) ಬಂಧಿತರು. ಆರೋಪಿಗಳಿಂದ 2 ಲಕ್ಷ ರೂ. ಬೆಲೆಯ 70ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಮತ್ತು 2 ಬೈಕ್, 4 ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಗುರುವಾರ (ಸೆ.17) ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಜಿನಗರ ಎಸ್‍ಎಸ್‍ಐ ಏರಿಯಾ, 1ನೆ ಮುಖ್ಯರಸ್ತೆಯಲ್ಲಿರುವ ಸ್ಟಾರ್ ಬಜಾರ್ ಕಟ್ಟಡದ ಬಳಿ ಬೈಕ್‍ನಲ್ಲಿ ಮಾದಕ ವಸ್ತುವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಮಾದಕ ವಸ್ತು ಮಾರಾಟ; ಆಫ್ರಿಕಾ ಪ್ರಜೆ ಸೇರಿ ಇಬ್ಬರ ಸೆರೆ
Follow Us