newsics.com
ಬೆಂಗಳೂರು: ಬ್ರಹ್ಮಗಂಟು ಧಾರಾವಾಹಿಯ ಗೀತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಭಾರತಿ ಭಟ್ ಅವರಿಗೂ ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್’ಡಿ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ನಾಳೆ (ಸೆ.22) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಅಧಿಕಾರಿಗಳು, ಇವರ ಜತೆ ಇನ್ನೊಬ್ಬ ಆಂಕರ್ ಅವರನ್ನೂ ವಿಚಾರಣೆಗೆ ಕರೆದಿದ್ದಾರೆ.
ತನಿಖೆಯಲ್ಲಿ ನಟಿ ಗೀತಾ ಭಾರತಿ ಭಟ್ ಹಾಗೂ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಆಂಕರ್ ಅಭಿಷೇಕ್ ಎಂಬುವರಿಗೆ ಡ್ರಗ್ ಪೆಡ್ಲರ್ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಬ್ರಹ್ಮಗಂಟು ನಟಿಗೂ ಡ್ರಗ್ಸ್ ನಂಟು; ಐಎಸ್’ಡಿ ಬುಲಾವ್
Follow Us