newsics.com
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿ, ಅವರಿಗೆ ಸಹಾಯ ಮಾಡಿದ ಆರೋಪಕ್ಕಾಗಿ ದರ್ಶನ್ ಲಮಾಣಿ ಅವರನ್ನು ಬಂಧಿಸಲಾಗಿದೆ.
ಡಾರ್ಕ್‍ನೆಟ್ ಮೂಲಕ ವಿದೇಶಗಳಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಅದರಲ್ಲಿ ಪ್ರಮುಖ ಆರೋಪಿಗಳಾಗಿದ್ದ ಹೆಮಂತ್ ಮತ್ತು ಸುನೀಶ್ ಎಂಬಿಬ್ಬರು ಪರಾರಿಯಾಗಿದ್ದರು. ಅವರ ಜತೆ ದರ್ಶನ್ ಕೂಡ ಇದ್ದರು. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಡ್ರಗ್ಸ್ ಖರೀದಿಯಲ್ಲಿ ಆರೋಪಿಗಳ ಪಾತ್ರವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಂದಹಾರ್’ನಲ್ಲಿ ಆತ್ಮಾಹುತಿ ದಾಳಿ; 4 ಸಾವು, 40 ಮಂದಿಗೆ ಗಾಯ
ಅರ್ನಾಬ್ ಮಧ್ಯಂತರ ಜಾಮೀನು ಅರ್ಜಿ ವಜಾ
ಪ್ರೀತಿಸಿದವನಿಗಾಗಿ ಬ್ಯಾನರ್ ಏರಿ ಕುಳಿತ ಬಾಲಕಿ!
ವಿನಯ ಕುಲಕರ್ಣಿಗೆ 14 ದಿನ ನ್ಯಾಯಾಂಗ ಬಂಧನ, ಜೈಲಲ್ಲೇ ದೀಪಾವಳಿ