Tuesday, May 24, 2022

ಡ್ರಗ್ಸ್ ಜಾಲ ಮತ್ತಷ್ಟು ಜಟಿಲ; ಇನ್ನಷ್ಟು ಸ್ಟಾರ್ ನಟರಿಗೆ ಸಿಸಿಬಿ ಶಾಕ್ ಸಾಧ್ಯತೆ

Follow Us

newsics.com
ಬೆಂಗಳೂರು: ಸ್ಯಾಂಡಲ್’ವುಡ್ ಮಾದಕ ಜಾಲದಲ್ಲಿ ಕನ್ನಡದ ಎ ವನ್ ಸ್ಟಾರ್’ಗಳೂ ಶಾಮೀಲಾಗಿದ್ದಾರೆ ಎಂದು ಉದ್ಯಮಿ ಸಂಬರಗಿ ಹೇಳಿದ್ದಾರೆ.
ಸ್ಯಾಂಡಲ್’ವುಡ್ ಡ್ರಗ್ಸ್ ಜಾಲದ ಬೆನ್ನತ್ತಿರುವ ಸಿಸಿಬಿ ಕೂಡ ಏಳು ಸ್ಟಾರ್ ಗಳ ಪಟ್ಟಿ ಸಿದ್ಧಪಡಿಸಿದ್ದು, ಇವರ ಬಗ್ಗೆ ಈಗಾಗಲೇ ಬಂಧಿತ ಆರೋಪಿಗಳಿಂದ ಮಾಹಿತಿ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಒಂದೆರಡು ದಿನಗಳಲ್ಲೇ ಮತ್ತಷ್ಟು ನಟ-ನಟಿಯರ ಮನೆ ಮೇಲೆ ದಾಳಿ ನಡೆಸಲಿದ್ದು, ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದೆ ಎಂದು ತಿಳಿದುಬಂದಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡದ ಜನಪ್ರಿಯ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸೇರಿ ಆರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜನಪ್ರಿಯ ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಆರ್ಯನ್, ಆರ್.ವಿ. ಯುವರಾಜ್ ಕೂಡ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬಸ್ ನಿಲ್ದಾಣದಲ್ಲಿ ಮಗು ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ : ತನಿಖೆಯಲ್ಲಿ ಬಯಲಾಯ್ತು ಅಕ್ರಮ ಸಂಬಂಧದ ಅಸಲಿಯತ್ತು

newsics.com ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ....

ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು

newsics.com ಮಹಾರಾಷ್ಟ್ರ: ಸ್ಕೂಬಾ ಡೈವಿಂಗ್ ವೇಳೆ 20 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೇ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾರಾಷ್ಟ್ರದ...

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ಲೇಖಕ ದೇವನೂರ ಮಹಾದೇವ

newsics.com ಮೈಸೂರು: 'ನನ್ನ ಪಾಠ ಸೇರಿದ್ದರೆ ಕೂಡಲೇ ಕೈ ಬಿಡಬೇಕು' ಎಂದು ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರ ಮಹಾದೇವ ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದಾರೆ. 'ನನ್ನದೊಂದು ಕಥನವನ್ನು ಹತ್ತನೇ ತರಗತಿ...
- Advertisement -
error: Content is protected !!