newsics.com
ಹಾಸನ/ಮಂಡ್ಯ/ಕೊಡಗು : ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪ ಸಂಭವಿಸಿದೆ ಎಂದು ದೃಢೀಕರಿಸಿದ್ದಾರೆ. ಮುಂಜಾನೆ 4:30ರಿಂದ 5 ಗಂಟೆ ಅವಧಿಯಲ್ಲಿ ಈ ಭೂಕಂಪ ಸಂಭವಿಸಿದೆ.ಭೂಕಂಪದ ಅನುಭವವಾಗುತ್ತಿದ್ದಂತೆಯೇ ನಿದ್ರೆಯಲ್ಲಿದ್ದ ಜನರು ಮನೆಗಳಿಂದ ಓಡಿ ಬಂದಿದ್ದಾರೆ .