ಬೆಂಗಳೂರು: ಗ್ರಹಣ ಕಾಲ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಗುರುವಾರ ವಾಕಿಂಗ್ ಗೂ ತೆರಳದೆ ಮನೆಯಲ್ಲೇ ಉಳಿದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಗ್ರಹಣ ಕಾಲದಲ್ಲಿ ಯಾವುದೇ ಕಾರ್ಯ ಆರಂಭಿಸಿದರೂ ಶುಭವಾಗುವುದಿಲ್ಲ ಎಂಬ ನಂಬಿಕೆಯೇ ಯಡಿಯೂರಪ್ಪ ಅವರು ಮನೆಯಿಂದ ಹೊರಬರದಿರಲು ಕಾರಣ ಎನ್ನಲಾಗಿದೆ.
ದೇವರಲ್ಲಿ ಅಪಾರ ನಂಬಿಕೆ ಹೊಂದಿರುವ ಸಿಎಂ ಯಡಿಯೂರಪ್ಪ ಅವರು ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಡಾಲರ್ಸ್ ಕಾಲೋನಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. ಅಲ್ಲದೆ ಗ್ರಹಣ ಮುಗಿಯುವವರೆಗೂ ಯಾರ ಭೇಟಿಗೂ ಯಡಿಯೂರಪ್ಪ ಅವಕಾಶ ನೀಡಿಲ್ಲ.