NEWSICS.COM
ನಾಗರಹೊಳೆ: ನಾಗರಹೊಳೆ ಅಭಯಾರಣ್ಯದ ಕಬಿನಿ ಹಿನ್ನೀರಿನ ಬಳಿ ಕಾಡಾನೆಗಳು ಅಡ್ಡಾಡುತ್ತಿದ್ದಾಗ ಪ್ರವಾಸಿಗರು ಜೀಪನ್ನು ಅವುಗಳತ್ತ ಕೊಂಡೊಯ್ದಿದ್ದಾರೆ. ಜೀಪಿನ ಶಬ್ದಕ್ಕೆ ಆನೆಯೊಂದು ಕೋಪಗೊಂಡು ಜೀಪನ್ನು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ.
ಆನೆ ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಂಡು ಜೀಪಿನಲ್ಲಿ ಇದ್ದವರು ಮತ್ತಷ್ಟು ಕೂಗಿದ್ದಾರೆ ಇದರಿಂದ ಆನೆಗಳ ಹಿಂಡೇ ಜೀಪನ್ನು ಅಟ್ಟಿಸಿಕೊಂಡು ಬಂದಿದೆ. ಚಾಲಕ ವೇಗವಾಗಿ ಜೀಪು ಚಲಾಯಿಸಿದ್ದರಿಂದ ಆನೆಗಳ ದಾಳಿಯಿಂದ ಪ್ರವಾಸಿಗರು ಪಾರಾಗಿದ್ದಾರೆ.
ಕಾಡಿನೊಳಗೆ ಸಫಾರಿಗೆ ತೆರಳಲು ಅನುಮತಿ ನೀಡಿದ ಜಾಗ ಬಿಟ್ಟು ಹಿನ್ನೀರಿನ ಬಳಿ ನಿಷೇದಿತ ಪ್ರದೇಶದಲ್ಲಿ ಜೀಪು ಓಡಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.