newscics.com
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15 ನಿಗದಿಪಡಿಸಿದೆ.
2021-22ರ ಇಪಿಎಫ್ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ನಂತರ ಶೇ.8.1ಕ್ಕೆ ಇಳಿಸಿತ್ತು. ಇದು ಅತ್ಯಂತ ಕಡಿಮೆ ಬಡ್ಡಿ ದರ ಎಂದು ಹೇಳಲಾಗಿತ್ತು. 1977-78ರ ನಂತರ ಇದೇ ಮೊದಲ ಬಾರಿಗೆ ಇಪಿಎಫ್ ಬಡ್ಡಿ ದರ ಶೇ. 8ಕ್ಕೆ ಕಡಿಮೆಯಾಗಿದೆ.
ಹಣಕಾಸು ಸಚಿವಾಲಯದ ಮೂಲಕ ಸರ್ಕಾರವು ಅನುಮೋದಿಸಿದ ನಂತರವೇ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ. ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19ಕ್ಕೆ ಒದಗಿಸಿದ 8.65 ಪ್ರತಿಶತದಿಂದ 2019-20ಕ್ಕೆ ಏಳು ವರ್ಷಗಳಲ್ಲಿ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಿದೆ.
ಪಿಎಸ್ಐ ಅಕ್ರಮ ನೇಮಕಾತಿ ಹಗರಣ: ಪರಾರಿಯಾಗಿದ್ದ ಆರೋಪಿ ಪಿಎಸ್ಐ ಬಂಧನ
ಹಿರಿಯ ಅಧಿಕಾರಿಯ ಕಿರುಕುಳ ತಡೆಯಲಾಗದೆ ರಾಷ್ಟ್ರಪತಿಗೆ ಪತ್ರ ಬರೆದ ಬೆಂಗಳೂರು ಪೊಲೀಸರು