newsics.com
ಚಾಮರಾಜನಗರ: ರಾಜ್ಯಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರವಾಸ ಮುಗಿಸಿ ನವದೆಹಲಿ ತಲುಪಿದ್ದಾರೆ.
ಆದರೆ ಅವರ ಬೆಂಗಾವಲಿಗೆ ಬಂದಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಚಾಮರಾಜ ನಗರದಲ್ಲಿ ಬೀಡು ಬಿಟ್ಟಿದೆ. ತಾಂತ್ರಿಕ ದೋಷ ಸರಿಪಡಿಸುವ ಕಾರ್ಯ ಮುಂದುವರಿದಿದೆ.
ವೈದ್ಯಕೀಯ ಕಾಲೇಜಿನ ಸಮಾರಂಭದಲ್ಲಿ ಭಾಗವಹಿಸಲು ರಾಷ್ಟ್ರಪತಿ ಅವರು ಚಾಮರಾಜ ನಗರಕ್ಕೆ ಬಂದಿದ್ದರು. ಬೆಂಗಾವಲಿಗೆ ಈ ಹೆಲಿಕಾಪ್ಟರ್ ಆಗಮಿಸಿತ್ತು.
ಹೆಲಿಕಾಪ್ಟರ್ ನಲ್ಲಿ ಆಯಿಲ್ ಸೋರಿಕೆ ಕಂಡು ಬಂದಿದೆ. ಇಂದು ಸಂಜೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.