newsics.com
ಬೆಂಗಳೂರು: ಒಂದು ವರ್ಷಕ್ಕೆ ಸೀಮಿತವಾಗಿದ್ದ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳ ಅವಧಿಯನ್ನ 10 ವರ್ಷಗಳಿಗೆ ನಮ್ಮ ಮೆಟ್ರೋ ವಿಸ್ತರಿಸಿದೆ.
ಈ ಬಗ್ಗೆ ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಮೊದಲು ಸ್ಮಾರ್ಟ್ ಕಾರ್ಡ್’ಗಳ ಅವಧಿ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಇದೀಗ ಈ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಪಡೆದ ಹಳೆ ಕಾರ್ಡ್’ಗಳಿಗೂ ಇದು ಅನ್ವಯವಾಗಲಿದ್ದು, ಹಳೆಯ ಹಾಗೂ ಹೊಸ ಕಾರ್ಡ್ ಅಷ್ಟೇ ಅಲ್ಲ, ಇನ್ಮುಂದೆ ಪಡೆಯುವ ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೂ ಇದು ಅನ್ವಯವಾಗಲಿದೆ. ಸ್ಮಾರ್ಟ್ ಕಾರ್ಡ್‍ಗಳನ್ನ 2030ರವರೆಗೂ ಬಳಸಲು ಅನುಮತಿ ನೀಡಲಾಗಿದೆ ಎಂದಿದೆ.
ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಅವಧಿ 10 ವರ್ಷಕ್ಕೆ ವಿಸ್ತರಣೆ
Follow Us