newsics.com
ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತಾಯಿ ಮತ್ತು ಮಗುವಿನ ಹತ್ಯೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಚಂದ್ರಕಲಾ ಮತ್ತು ಅವರ ಮಗುವನ್ನು ಹತ್ಯೆ ಮಾಡಲಾಗಿತ್ತು. ಇದೀಗ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಆರೋಪಿ ಪ್ರಶಾಂತ್ ಗೆ ಫೇಸ್ ಬುಕ್ ಮೂಲಕ ಚಂದ್ರಕಲಾ ಅವರ ಪರಿಚಯವಾಗಿತ್ತು. ಅವರನ್ನು ಹುಡುಕಿಕೊಂಡು ಚಂದ್ರಕಲಾ ಅವರ ಮನೆಗೆ ಬಂದಿದ್ದ.
ಈ ವೇಳೆ ಸುಸ್ತಾಗಿದೆ. ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳುತ್ತೇನೆ ಎಂದು ಪ್ರಶಾಂತ್ ಹೇಳಿದ್ದನಂತೆ. ರೂಮ್ ನಲ್ಲಿ ವಿಶ್ರಾಂತಿ ಪಡೆಯಲು ಚಂದ್ರಕಲಾ ಸೂಚಿಸಿದ್ದರಂತೆ. ಅರೆ ಬೆತ್ತಲಾಗಿ ಪ್ರಶಾಂತ್ ಮಲಗಿದ್ದ ವೇಳೆ ಅದನ್ನು ಚಂದ್ರಕಲಾ ಚಿತ್ರೀಕರಣ ಮಾಡಿದ್ದರಂತೆ.
ಬಳಿಕ ಈ ದೃಶ್ಯ ತೋರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದರಂತೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆರೋಪಿ ಪ್ರಶಾಂತ್ , ಚಂದ್ರಕಲಾ ಮತ್ತು ಅವರ ಮಗುವನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.