newsics.com
ಮೈಸೂರು: ತೆಲುಗು ನಟ ನರೇಶ್ ಅವರ ಸಂಸಾರದಲ್ಲಿ ಎದ್ದಿರುವ ಬಿರುಗಾಳಿ ಇದೀಗ ಮೈಸೂರಿಗೂ ತಟ್ಟಿದೆ. ಮೈಸೂರಿನ ಹೋಟೆಲ್ ವೊಂದರ ಬಳಿ ಹೈ ಡ್ರಾಮಾ ನಡೆದಿದೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಹುಣಸೂರು ರಸ್ತೆಯ ಹೋಟೆಲ್ ವೊಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಪಡೆದ ರಮ್ಯಾ ರಘಪತಿ, ಅವರು ಕೊಠಡಿಯಿಂದ ಹೊರ ಬರುವುದನ್ನು ಕಾದು ಕುಳಿತಿದ್ದರು..
ನರೇಶ್ ಮತ್ತು ಪವಿತ್ರಾ ಲೋಕೇಶ್ ಹೊರ ಬರುತ್ತಿದ್ದಂತೆ ಚಪ್ಪಲಿಯಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಲ್ಲಿ ಇದ್ದ ಪೊಲೀಸರು ಅವರನ್ನು ತ಼ಡೆದಿದ್ದಾರೆ.
ಬಳಿಕ ರಮ್ಯಾ ರಘಪತಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನರೇಶ್, ವಂಚಕಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ರಮ್ಯಾ ರಘುಪತಿ ಮತ್ತು ನರೇಶ್ ಸಂಸಾರದಲ್ಲಿನ ಗಲಾಟೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ