newsics.com
ಬೆಂಗಳೂರು: ಚಾಕು ಇರಿದು ತಂದೆಯೇ ಮಗನನ್ನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೃಷ್ಣ ಕನ್ವೆನ್ಷನ್ ಹಾಲ್ ಬಳಿ ನಡೆದಿದೆ. ಮಗ ಸಂತೋಷ್ ಗೆ ಚಾಕು ಇರಿದು ತಂದೆ ಗುರುರಾಜ್ ಕೊಂದಿದ್ದಾನೆ.
ಆರ್.ಟಿ.ಓ. ಕಚೇರಿಯಲ್ಲಿ ತಂದೆ-ಮಗ ಏಜೆಂಟರಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಮಗ ಪ್ರವಾಸಕ್ಕೆ ಹೋಗಿ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ತಂದೆ ತನ್ನ ಮಗನನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ಮಾಡಿದ ಬಳಿಕ ಗುರುರಾಜ್ ಸಾಕ್ಷ್ಯ ನಾಶಗೊಳಿಸಲು ಯತ್ನಿಸಿದ್ದು, ಮನೆ ತುಂಬಾ ಇದ್ದ ರಕ್ತ ತೊಳೆದಿದ್ದಾನೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 373 ಕೋರೋನಾ ಪ್ರಕರಣ ಪತ್ತೆ, 611 ಸೋಂಕಿತರು ಗುಣಮುಖ,10 ಸಾವು