newsics.com
ಮಂಗಳೂರು (ದ.ಕ.): ತಂದೆಯೊಬ್ಬ ತನ್ನ ಮಗನ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ.
ರಾಜೇಶ್ ಪ್ರಭು, ತನ್ನ 14 ವರ್ಷದ ಮಗ ಸುಧೀಂದ್ರ ಪ್ರಭು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಸಂಬಳದ ವಿಚಾರಕ್ಕೆ ನೌಕರರ ಜೊತೆ ರಾಜೇಶ್ ಪ್ರಭುವಿಗೆ ಗಲಾಟೆಯಾಗುತ್ತಿತ್ತು. ಕೋಪಗೊಂಡ ರಾಜೇಶ್ ನೌಕರರ ಮೇಲೆ ಗುಂಡು ಹಾರಿಸಲು ಮುಂದಾಗಿದ್ದು, ನೌಕರರ ಮೇಲೆ ಗುರಿಯಿಟ್ಟ ಗುಂಡು ಮಗ ಸುಧೀಂದ್ರನಿಗೆ ತಗುಲಿದೆ ಎಂದು ತಿಳಿದುಬಂದಿದೆ.