Thursday, October 29, 2020

ನಿಂದನೆ ಆರೋಪ; ನಟ ಜೈ ಜಗದೀಶ್ ವಿರುದ್ಧ ಎಫ್ ಐ ಆರ್

ಬೆಂಗಳೂರು: ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ವೇಳೆ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ ಜೈ ಜಗದೀಶ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಕಿಟ್ ವಿತರಣೆ ವೇಳೆ ಜೈ ಜಗದೀಶ್ ಅವರು ಸಾರಾ ಗೋವಿಂದು ಅವರನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದ್ದು, ಈ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಸಾರಾ ಗೋವಿಂದು ಅವರು ಜೈ ಜಗದೀಶ್ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,, ನಟ ಜೈ ಜಗದೀಶ್ ಅವರಿಗೆ ಬಂಧನ ಭೀತಿ ಎದುರಾಗಿದೆ.

ಮತ್ತಷ್ಟು ಸುದ್ದಿಗಳು

Latest News

ವಿಶ್ವದಲ್ಲಿ ಮತ್ತೆ ಕೊರೋನಾ ಪ್ರಮಾಣ ಹೆಚ್ಚಳ- WHO ಕಳವಳ

newsics.comನವದೆಹಲಿ: ಜಗತ್ತಿನ ವಿವಿಧ ದೇಶಗಳಲ್ಲಿ ಕಳೆದೊಂದು ವಾರದಲ್ಲಿ 2 ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ...

ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾರೋಹಣ

newsics.com ಕಾಸರಗೋಡು:  ಕೇರಳದ ಕಾಸರಗೋಡು ಸಮೀಪದ ಎಡನೀರು ಮಠದ ನೂತನ ಮಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ  ಅವರ ಪೀಠಾರೋಹಣ ಸಮಾರಂಭ ಇಂದು ನಡೆಯಿತು. ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಮತ್ತು ಗಣ್ಯರು ಈ...

ಇರಾನ್’ನಲ್ಲಿ ಭೂಗರ್ಭ ಅಣ್ವಸ್ತ್ರ ಘಟಕ; ಹೆಚ್ಚಿದ ಆತಂಕ

newsics.comದುಬೈ: ಇರಾನ್ ಭೂಗರ್ಭ ಅಣ್ವಸ್ತ್ರ ತಯಾರಿಕಾ ಘಟಕವನ್ನು ಆರಂಭಿಸಿದ್ದು, ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ.ನಟಾಂಝ್ ಪ್ರದೇಶದಲ್ಲಿ ಇರಾನ್‍ ತನ್ನ ಅಣ್ವಸ್ತ್ರಗಳ ತಯಾರಿಕಾ ಘಟಕ ಆರಂಭಿಸಿರುವುದನ್ನು ಉಪಗ್ರಹ ಚಿತ್ರಗಳು...
- Advertisement -
- Advertisement -
error: Content is protected !!