Friday, May 20, 2022

ಕೆಪಿಟಿಸಿಎಲ್ ಘಟಕದಲ್ಲಿ ಅಗ್ನಿ ಅನಾಹುತ; ಇಬ್ಬರು ಅಧಿಕಾರಿ ಸೇರಿ 15 ಮಂದಿಗೆ ಗಾಯ

Follow Us

newsics.com
ಬೆಂಗಳೂರು: ನಗರದ ಯಲಹಂಕ ಕೆಪಿಟಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 15 ಕ್ಕೂ ಹೆಚ್ಚು ಸಿಬ್ಬಂದಿ ಗಯ್ಗೊಂಡಿದ್ದಾರೆ. ಈ ಪೈಕಿ ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿವೆ.
ಶುಕ್ರವಾರ ಮುಂಜಾನೆ 3.30ರ ವೇಳೆಗೆ ಕೆಪಿಟಿಸಿಎಲ್ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಘಟಕದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು.
ಗಾಯಗೊಂಡ ಸಿಬ್ಬಂದಿಯನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾಸ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿತ್ತು. ಮಾಹಿತಿ ತಿಳಿದ ತಕ್ಷಣ 7 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬ ಹೇಳಿದ್ದಾರೆ.
350 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ಕೆಪಿಟಿಸಿಎಲ್ ಘಟಕ ಇದಾಗಿದೆ.

ನೂರಾರು ಆನೆಗಳ ಜೀವಕ್ಕೆ ಕಂಟಕವಾಯ್ತು ಪಾಚಿ ವಿಷ!

ಡ್ರಗ್ಸ್ ಜಾಲದ ನಂಟು ಆರೋಪ: ಕಣ್ಣೀರಿಟ್ಟ ಅನುಶ್ರೀ

ಇಂದಿನಿಂದ ವನ್ಯಜೀವಿ ಸಪ್ತಾಹ; ನಿತ್ಯವೂ ಆಗಲಿ ಸಂರಕ್ಷಣೆ

ಬೆಂಗಳೂರು ಹಿಂಸಾಚಾರ ಪ್ರಕರಣ: ಪೊಲೀಸರ ಹೇಳಿಕೆ ದಾಖಲಿಸಿದ ಎನ್ ಐ ಎ

ಮತ್ತಷ್ಟು ಸುದ್ದಿಗಳು

Latest News

ಮಾತುಗಾರರ ಶೋಧಕ್ಕೆ ಮುಂದಾದ ಕಾಂಗ್ರೆಸ್‌ನಿಂದ ಭಾಷಣ ಸ್ಪರ್ಧೆ: ವಿಜೇತರಿಗೆ ಐಫೋನ್ ಬಹುಮಾನ

newsics.com ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಮುಂದಾಗಿರುವ ಕಾಂಗ್ರೆಸ್, ಇದಕ್ಕಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ,...

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...
- Advertisement -
error: Content is protected !!