newsics.com
ಚಿತ್ರದುರ್ಗ: ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿದ ‘ರಾಜ್ಯದ ಮೊದಲ ಮಹಿಳೆ’ ಖ್ಯಾತಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಎಸ್. ವಿ. ಸುಮಂಗಲಮ್ಮ (69) ಹೃದಯಾಘಾತದಿಂದ ಬುಧವಾರ ನಿಧನರಾದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ ಜಿ ಕೆರೆ ಗ್ರಾಮದ ವೀರಭದ್ರಪ್ಪ ಅವರ ಪತ್ನಿ ಎಸ್ ವಿ ಸುಮಂಗಲಮ್ಮ, ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದರು.
ಸುಮಾರು 70 ಎಕರೆ ಒಣ ಭೂಮಿಯನ್ನು ಹಸನು ಮಾಡಿ, ತೆಂಗಿನ ತೋಟ ನಿರ್ಮಿಸುವ ಮೂಲಕ, ಮಾದರಿ ರೈತ ಮಹಿಳೆ ಎನಿಸಿದ್ದರು.
ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬೆನ್ನಲ್ಲಿ ಮಗು, ಹೆಗಲಲ್ಲಿ ಲಸಿಕೆ ಬ್ಯಾಗ್… ನದಿ ದಾಟಿದ ಮಂತಿ ಕುಮಾರಿ ಕರ್ತವ್ಯನಿಷ್ಠೆಗೆ ಸಲಾಂ…
ನ್ಯೂಜಿಲೆಂಡ್ ಆಟಗಾರರನ್ನು ನಿಂದಿಸಿದ ಇಬ್ಬರು ಭಾರತೀಯರನ್ನು ಹೊರಹಾಕಿದ ಸಿಬ್ಬಂದಿ
ಮಲ್ಯ, ಚೋಕ್ಸಿ, ಮೋದಿಯ ಜಪ್ತಿ ಆಸ್ತಿ ಬ್ಯಾಂಕ್’ಗಳಿಗೆ ವರ್ಗಾಯಿಸಿದ ಇಡಿ