newsics.com
ಮಂಗಳೂರು; ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ 10 ಜನರಿದ್ದ ಬೋಟ್ ಮುಳುಗಿದ ಘಟನೆ ಪಣಂಬೂರಿನ ಬಳಿ ನಡೆದಿದೆ.
ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಪಣಂಬೂರಿನ 90 ನಾಟಿಕಲ್ ಮೈಲಿನಷ್ಟು ದೂರದಲ್ಲಿ ಮುಳುಗಿದೆ.
ತಕ್ಷಣವೇ ಸಮೀಪದಲ್ಲಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ಮಳುಗುತ್ತಿದ್ದವರನ್ನು ರಕ್ಷಿಸಿದ್ದಾರೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಕೃಷ್ಣ ಕುಮಾರ್ ಎನ್ನುವವರಿಗೆ ಸೇರಿದ ಬೋಟ್ ಶನಿವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ.